ಪ್ರಾರ್ಥನೆ ಹೇಗಿರಬೇಕು?
ಗುರು ನಾನಕರ ಜೀವನದಲ್ಲಿ ನಡೆದ ಘಟನೆಯಿದು.
ನಾನು ಹಿಂದುವೂ ಅಲ್ಲ, ಮುಸ್ಲಿಂನೂ ಅಲ್ಲ. ನಾನೊಬ್ಬ ಮನುಷ್ಯ ಎಂದು ಅವರು ನಾನಕರು ಯಾವಾಗಲೂ ಹೇಳುತ್ತಿದ್ದರು. ಈ ತರಹದ ವಾದವನ್ನು ಜನರು ಮೆಚ್ಚಲಿಲ್ಲ. ಬದಲಾಗಿ ಅವರು ಸುಲ್ತಾನ್ಪುರದ ನವಾಬನಿಗೆ ದೂರಿತ್ತರು 'ಈ ಮನುಷ್ಯ ದೇವರನ್ನು ಅಂದರೆ ಅಲ್ಲಾಹನನ್ನು ನಂಬುತ್ತಿಲ್ಲ' ಎಂದು . ನವಾಬರು ನಾನಕರನ್ನು ಕರೆಯಿಸಿ ವಿಚಾರಿಸತೊಡಗಿದರು. ಆ ಸಮಯದಲ್ಲಿ ಅಲ್ಲಿ ಒಬ್ಬ ಮುಲ್ಲಾನೂ ಇದ್ದನು. ನವಾಬ ಅವನನ್ನು ತೋರುತ್ತ ' ಈತ ಮುಲ್ಲಾ. ದೇವನನ್ನು ನಂಬುವವ . ಈತ ನಿಜವಾದ ಮುಸಲ್ಮಾನ ಅಲ್ಲ ಎಂದಾದರೆ ಇನ್ನು ನಿಜವಾದ ಮುಸಲ್ಮಾನ ಯಾರು?' ಎಂದು ಕೇಳಿದ. ನಾನಕರು ಧೈರ್ಯದಿಂದ ಉತ್ತರಿಸಿದರು-'ಮುಸಲ್ಮಾನರೆಂದು ಕರೆಯಿಸಿ ಕೊಂಡವರೆಲ್ಲ ನಿಜವಾದ ಮುಸಲ್ಮಾನರಲ್ಲ; ಯಾರಿಗೆ ಕರುಣೆಯೇ ಮಸೀದಿಯೋ, ಯಾರಿಗೆ ಶ್ರದ್ಧೆಯೇ ಪ್ರಾರ್ಥನೆಯೋ, ಪ್ರಾಮಾಣಿಕ ಜೀವನವೇ ಕುರಾನೋ ಅವರೇ ನಿಜವಾದ ಮುಸಲ್ಮಾನರು'
ಆಸ್ಥಾನದಲ್ಲಿದ್ದ ಖಾಜಿಗಳು ಬಿಡಲಿಲ್ಲ. 'ನೀನು ಇಷ್ಟೆಲ್ಲ ಹೇಳುತ್ತೀಯಲ್ಲ, ಮಸೀದಿಗೆ ಬಂದು ಪ್ರಾಥನೆ ಮಾಡಬಲ್ಲೆಯಾ?' ಎಂದು ಸವಾಲು ಹಾಕಿದರು. ನಾನಕರು 'ಅದಕ್ಕೇನಂತೆ? ಖಂಡಿತವಾಗಿ ಬರುವೆ. ಭಗವಂತನ ಪ್ರಾರ್ಥನೆಗೆ ಮಸೀದಿಯಾದರೇನು? ಮಂದಿರವಾದರೇನು? ' ಎಂದು ಮಸೀದಿಗೆ ಬರಲು ಒಪ್ಪಿಕೊಂಡರು.
ಮಸೀದಿಗೆ ನಾನಕರನ್ನು ಕರೆದುಕೊಂಡು ಬಂದರು. ಅಲ್ಲಿ ಅನೇಕರು ಸಾಲಾಗಿನಿಂತು ಬಾಗುವುದು, ನಮಸ್ಕರಿಸುವುದು , ಬಾಯಲ್ಲಿ ಏನನ್ನೋ ಹೇಳುವುದು ಮಾಡುತ್ತಿದ್ದರು. ಪ್ರಾರ್ಥನೆ ಮಾಡುತ್ತೇನೆಂದು ಒಪ್ಪಿಕೊಂಡು ಬಂದ ನಾನಕರು ಮಾತ್ರ ಪ್ರಾರ್ಥನೆಯನ್ನು ಮಾಡದೇ ನಗುತ್ತ ನಿಂತಿದ್ದರು. ನೋಡಿ ಮುಲ್ಲಾನಿಗೆ ಸಿಟ್ಟು ಬಂತು. ಪ್ರಾರ್ಥನೆ ಮಾಡದೇ ನೀವೇಕೆ ನಗುತ್ತಿರುವುದು? ಎಂದು ಕೇಳಿದ. ನಾನು ಪ್ರಾರ್ಥನೆ ಮಾಡುತ್ತಿರಲಿಲ್ಲ, ಹಾಗೆಯೇ ನೀವೂ ಪ್ರಾಥನೆಯನ್ನು ಇದೆಲ್ಲ ಬರೀ ಸೋಗು. ಅದಕ್ಕೆ ನಗುಬಂದಿತು ಎಂದರು. ತುಂಬಾ ಸಿಟ್ಟುಗೊಂಡ ಮುಲ್ಲಾ 'ಪ್ರಾರ್ಥನೆ ಮಾಡುತ್ತಿರುವವನನ್ನು ನಿಂದಿಸುವ ಈ ಕಾಫೀರನನ್ನು ವಿಚಾರಣೆ ನಡೆಸಿ ಮರಣದಂಡನೆಗೆ ಗುರಿಪಡಿಸಬೇಕೆಂದು ನ್ಯಾಯಾಲಯದ ಮೊರೆಹೊಕ್ಕ. ನ್ಯಾಯಾಧೀಶ ನೀನೇಕೆ ನಗುತ್ತಿದ್ದೆ ಎಂದು ಕೇಳಲು ನಾನಕರು ಮುಲ್ಲಾ ಮತ್ತು ನವಾಬರು ಪ್ರಾಥನೆ ಮಾಡುತ್ತಿರಲಿಲ್ಲ. ಅದೊಂದು ಸೋಗಾಗಿತ್ತು ಅದಕ್ಕೇ ನಾನು ನಗುತ್ತಿದ್ದೆ ಎಂದರು ನ್ಯಾಯಾಧೀಶ ಅದು ಹೇಗೆ ಹೇಳುತ್ತೀ ಎಂದು ಕೇಳಲು ನಾನಕರು ನೀವು ಅವರನ್ನೇ ಕರೆಸಿ ಕೇಳಬಹುದು ಎಂದರು. ನ್ಯಾಯಾಧೀಶರು ಮುಲ್ಲಾ ಮತ್ತು ನವಾಬರನ್ನು ನ್ಯಾಯಾಲಯಕ್ಕೆ ಕರೆಸಿದರು. ನ್ಯಾಯಾಧೀಶರು ನಾನಕರನ್ನು ಕೇಳಿದರು - ನೋಡು, ಈಗ ಅವರೆದುರಿಗೆ ಹೇಳು ಪ್ರಾರ್ಥನೆ ಮಾಡದೆ ಅವರೇನು ಮಾಡುತ್ತಿದ್ದರು ಎಂಬುದನ್ನು . ಆಗ ನಾನಕರು ' ಮುಲ್ಲಾನು ಮನೆಯಲ್ಲಿದ್ದ ಚಿಕ್ಕ ಕುದುರೆಮರಿ ಪಕ್ಕದಲ್ಲಿದ್ದ ಬಾವಿಯಲ್ಲೇನಾದರು ಬಿದ್ದರೆ ಏನುಮಾಡುವುದು ಎಂದು ಯೋಚಿಸುತ್ತಿದ್ದರು . ಅಲ್ಲದೇ ನವಾಬರು ಉತ್ತಮ ಕುದುರೆಯನ್ನು ಖರೀದಿಸಲು ತಮ್ಮ ಸೇವಕರನ್ನು ಕಾಬೂಲಿಗೆ ಕಳುಹಿಸಿದ್ದು ಇನ್ನೂ ಅವರ್ಯಾಕೆ ಬಂದಿಲ್ಲ ಎಂದು ಯೋಚಿಸುತ್ತಿದ್ದರು. ಅವರು ಪವಿತ್ರ ಖುರಾನನ್ನು ಹಿಡಿದು ನಾನು ಹೇಳಿದ್ದು ನಿಜವೋ ಸುಳ್ಳೋ ಎಂಬುದನ್ನು ಹೇಳಲಿ ಎಂದು ಹೇಳಿದರು. ಇದನ್ನು ಕೇಳಿದ ಮುಲ್ಲಾ ಮತ್ತು ನವಾಬರಿಬ್ಬರೂ ಸ್ಥಂಭೀಭೂತರಾದರು. ಅವರು ನ್ಯಾಯಾಧೀಶರೆದುರು ನಿಜವನ್ನು ಒಪ್ಪಿಕೊಂಡರು. ನ್ಯಾಯಾಧೀಶರೂ ನಾನಕರಿಂದ ಪ್ರಭಾವಿತರಾದರು. ಮನದಲ್ಲಿ ಬೇರೇನನ್ನೋ ಆಲೋಚಿಸುತ್ತಾ ಮೇಲ್ನೋಟಕ್ಕೆ ಪ್ರಾಥನೆ ಮಾಡುವುದಕ್ಕಿಂತ ಅದನ್ನು ಮಾಡದಿರುವುದೇ ಮೇಲು ಎಂದು ಅಲ್ಲಿದ್ದ ಎಲ್ಲರಿಗೂ ಅರ್ಥವಾಗಿತ್ತು.
ಮೊದಲನೆಯದಾಗಿ ಪತ್ರಿಕೆಗಳನ್ನು ತಮ್ಮ ಭಾಷಾಕೌಶಲ್ಯವನ್ನು ವೃದ್ಧಿಸಿಕೊಳ್ಲುವ ಉದ್ದೇಶದಿಂದ ಓದಬೇಕು. ವರದಿಗಳಲ್ಲಿ ಬರುವ ಹೊಸಪದಗಳ ಬಗ್ಗೆ ಹಾಗೂ ಭಾಷಾಶೈಲಿ, ವಾಕ್ಯರಚನೆ, ಇವುಗಳಮೇಲೆ ನಮ್ಮ ಗಮನವಿರಬೇಕು.
ಎರಡನೆಯದಾಗಿ ಪ್ರಚಲಿತ ವಿದ್ಯಮಾನವನ್ನು ತಿಳಿಯಲು ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪತ್ರಿಕೆಯನ್ನು ಓದಬೇಕು. ಮುಖ್ಯವೆನಿಸಿದ್ದನ್ನು ಬರೆದಿಟ್ಟುಕೊಳ್ಳುವ ಹವ್ಯಾಸ ಮುಂದೆ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯಮಾಡುವುದು. ಮೂರನೆಯದಾಗಿ ಮನೋರಂಜನೆಗಾಗಿ ಪತ್ರಿಕೆಯನ್ನು ಓದುವುದು ಎಲ್ಲರಿಗೂ ತಿಳಿದೇ ಇದೆ. ಓದುವ ಹವ್ಯಾಸವು ವಿದ್ಯಾರ್ಥಿಗಳನ್ನು ಬೇರೆ ಕೆಲವು ದುಶ್ಚಟಗಳಿಂದ ರಕ್ಷಿಸುವುದು.
ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಬರುವ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಂಡರೆ ಅಸೈನಮೆಂಟು ಪ್ರೊಜೆಕ್ಟುಗಳನ್ನು ಮಾಡಲು ಅನುಕೂಲವಾಗುವುದು. ಅಂತರ್ ಜಾಲದ ಮೊರೆಹೋಗಿ ವಿವರವನ್ನೂ ಚಿತ್ರವನ್ನೂ ಸಂಗ್ರಹಿಸಿ ಈ ಕೆಲಸವನ್ನು ಮಾಡುವುದಕ್ಕಿಂತ ಪತ್ರಿಕೆಗಳಿಂದ ಸಂಗ್ರಹಿಸಿ ಮಾಡುವುದು ಹೆಚ್ಚು ಆಸಕ್ತಿದಾಯಕವ್ವಗಿರುತ್ತದೆ ಮತ್ತು ಹೆಚ್ಚು ಪ್ರಯೋಜನಕಾರಿಯೂ ಹೌದು.
ಇಂದು ಬೇರೆಬೇರೆ ವಿಷಯಾಧಾರಿತ ಪತ್ರಿಕೆಗಳು ಲಭ್ಯವಿದೆ. ವಿದ್ಯಾರ್ಥಿಗಳು ತಮಗಿಷ್ಟವಾದ ಪತ್ರಿಕೆಗಳನ್ನು ಕೊಂಡು ಓದಬಹುದು. ಆಗ ಓದು ಇನ್ನೂ ಹೆಚ್ಚು ಪ್ರಯೋಜನಕಾರಿಯಾಗುವುದು.
ಓದಿ ಆದಮೇಲೆ ಪತ್ರಿಕೆಗಳನ್ನು ಬಿಸಾಕದೆ ಸಂಗ್ರಹಿಸಿಟ್ಟು ಕೊಳ್ಳಬೇಕು ಅಥವಾ ನಮಗಿಷ್ಟವಾದ, ಮುಂದೆ ಉಪಯೋಗವಾಗಬಹುದು ಎಂದೆನಿಸುವ ಬರಹಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಬಿಡುಗಡೆಯಾಗುವ ಎಷ್ಟೋ ಪುಸ್ತಕಗಳು ಪತ್ರಿಕೆಗಳಲ್ಲಿ ಪ್ರಕಟವಾದ ಅಂಕಣಗಳ ಸಂಗ್ರಹವೇ ಆಗಿರುತ್ತದೆ ಎಂಬುದನ್ನು ಮರೆಯಬಾರದು. .
ವಿದ್ಯಾರ್ಥಿಗಳು ಪತ್ರಿಕೆಗಳನ್ನು ಹೇಗೆ ಓದಬೇಕು?
ಪತ್ರಿಕೆಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಕರೆಯುತ್ತಾರೆ. ಅನೇಕ ಕಾರಣಗಳಿಂದ ಪತ್ರಿಕೆಗಳು ಜೀವನದ ಅವಿಭಾಜ್ಯ ಅಂಗವಾಗಿದೆ. ಸಾಮಾನ್ಯವಾಗಿ ಅಬಾಲವೃದ್ಧರಾದಿಯಾಗಿ ಎಲ್ಲರೂ ತಮ್ಮತಮ್ಮದೇ ಕಾರಣಗಳಿಗಾಗಿ ಪತ್ರಿಕೆಗಳನ್ನು ಓದುತ್ತಾರೆ. ವಿದ್ಯಾರ್ಥಿಗಳಿಗಂತೂ ಪತ್ರಿಕೆಯನ್ನು ಓದುವ ಹವ್ಯಾಸ ಅವರ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಸಹಾಯಕಾರಿಯಾಗಿದೆ. ಆದರೆ ಅವರು ಸಮಯಕಳೆಯಲು ದೊಡ್ಡವರು ಓದುವಂತೆ ಪತ್ರಿಕೆಯನ್ನು ಓದಬಾರದು. ಪತ್ರಿಕೆಯನ್ನು ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ನಿರ್ದಿಷ್ಟವಾದ ರೀತಿಯಲ್ಲಿ ಓದಬೇಕು. ಮೊದಲನೆಯದಾಗಿ ಪತ್ರಿಕೆಗಳನ್ನು ತಮ್ಮ ಭಾಷಾಕೌಶಲ್ಯವನ್ನು ವೃದ್ಧಿಸಿಕೊಳ್ಲುವ ಉದ್ದೇಶದಿಂದ ಓದಬೇಕು. ವರದಿಗಳಲ್ಲಿ ಬರುವ ಹೊಸಪದಗಳ ಬಗ್ಗೆ ಹಾಗೂ ಭಾಷಾಶೈಲಿ, ವಾಕ್ಯರಚನೆ, ಇವುಗಳಮೇಲೆ ನಮ್ಮ ಗಮನವಿರಬೇಕು.
ಎರಡನೆಯದಾಗಿ ಪ್ರಚಲಿತ ವಿದ್ಯಮಾನವನ್ನು ತಿಳಿಯಲು ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪತ್ರಿಕೆಯನ್ನು ಓದಬೇಕು. ಮುಖ್ಯವೆನಿಸಿದ್ದನ್ನು ಬರೆದಿಟ್ಟುಕೊಳ್ಳುವ ಹವ್ಯಾಸ ಮುಂದೆ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯಮಾಡುವುದು. ಮೂರನೆಯದಾಗಿ ಮನೋರಂಜನೆಗಾಗಿ ಪತ್ರಿಕೆಯನ್ನು ಓದುವುದು ಎಲ್ಲರಿಗೂ ತಿಳಿದೇ ಇದೆ. ಓದುವ ಹವ್ಯಾಸವು ವಿದ್ಯಾರ್ಥಿಗಳನ್ನು ಬೇರೆ ಕೆಲವು ದುಶ್ಚಟಗಳಿಂದ ರಕ್ಷಿಸುವುದು.
ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಬರುವ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಂಡರೆ ಅಸೈನಮೆಂಟು ಪ್ರೊಜೆಕ್ಟುಗಳನ್ನು ಮಾಡಲು ಅನುಕೂಲವಾಗುವುದು. ಅಂತರ್ ಜಾಲದ ಮೊರೆಹೋಗಿ ವಿವರವನ್ನೂ ಚಿತ್ರವನ್ನೂ ಸಂಗ್ರಹಿಸಿ ಈ ಕೆಲಸವನ್ನು ಮಾಡುವುದಕ್ಕಿಂತ ಪತ್ರಿಕೆಗಳಿಂದ ಸಂಗ್ರಹಿಸಿ ಮಾಡುವುದು ಹೆಚ್ಚು ಆಸಕ್ತಿದಾಯಕವ್ವಗಿರುತ್ತದೆ ಮತ್ತು ಹೆಚ್ಚು ಪ್ರಯೋಜನಕಾರಿಯೂ ಹೌದು.
ಇಂದು ಬೇರೆಬೇರೆ ವಿಷಯಾಧಾರಿತ ಪತ್ರಿಕೆಗಳು ಲಭ್ಯವಿದೆ. ವಿದ್ಯಾರ್ಥಿಗಳು ತಮಗಿಷ್ಟವಾದ ಪತ್ರಿಕೆಗಳನ್ನು ಕೊಂಡು ಓದಬಹುದು. ಆಗ ಓದು ಇನ್ನೂ ಹೆಚ್ಚು ಪ್ರಯೋಜನಕಾರಿಯಾಗುವುದು.
ಓದಿ ಆದಮೇಲೆ ಪತ್ರಿಕೆಗಳನ್ನು ಬಿಸಾಕದೆ ಸಂಗ್ರಹಿಸಿಟ್ಟು ಕೊಳ್ಳಬೇಕು ಅಥವಾ ನಮಗಿಷ್ಟವಾದ, ಮುಂದೆ ಉಪಯೋಗವಾಗಬಹುದು ಎಂದೆನಿಸುವ ಬರಹಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಬಿಡುಗಡೆಯಾಗುವ ಎಷ್ಟೋ ಪುಸ್ತಕಗಳು ಪತ್ರಿಕೆಗಳಲ್ಲಿ ಪ್ರಕಟವಾದ ಅಂಕಣಗಳ ಸಂಗ್ರಹವೇ ಆಗಿರುತ್ತದೆ ಎಂಬುದನ್ನು ಮರೆಯಬಾರದು. .
No comments:
Post a Comment