ಬೆಲೆಯ ನೆಲೆ
ಒಂದು ವಸ್ತುವಿಗೆ ಅಥವಾ ಒಂದು ಸಂಗತಿಗೆ ನಾವು ಕಟ್ಟುವ ಬೆಲೆ ಸಾಪೇಕ್ಷವಾದುದು; ಸಾಂದರ್ಭಿಕವಾದುದು. ಶ್ರೀಮಂತನಾದ ವ್ಯಕ್ತಿಯೋಬ್ಬನಿಗೆ ಒಂದು ವಸ್ತುವುಗೆ ನಿಗದಿ ಪಡಿಸಿದ ಬೆಲೆ ತುಂಬಾ ಕಡಿಮೆ ಎನಿಸಬಹುದು. ಆದರೆ ಅದೇ ಬೆಲೆ ಬಡವನಿಗೆ ಜಾಸ್ತಿ ಆಯ್ತು ಎನಿಸಬಹುದು. ಈ ಭಿನ್ನ ಅನಿಸಿಕೆಗೆ ಕಾರಣವೇನು?

ತುಂಬಾ ಕಷ್ಟಪಟ್ಟು ಗಳಿಸಿದ ವಸ್ತುವಿಗೆ ನಾವು ಹೆಚ್ಚು ಬೆಲೆ ಕೊಡುತ್ತೇವೆ. ಆದರೆ ಅನಾಯಾಸವಾಗಿ ದೊರಕಿದದ್ದು ಅದು ಮಹತ್ವದ್ದಾಗಿದ್ದರೂ ಕೂಡಾ ಅದಕ್ಕೆ ಬೆಲೆ ಇಲ್ಲ. ಉದಾಹರಣೆಗೆ ಗಾಳಿ ನೀರು ಬೆಳಕು ಇವು ನಮಗೆ ತುಂಬಾ ಅಗತ್ಯ. ಆದರೆ ಅವಕ್ಕೆ ನಾವು ಹೆಚ್ಚಾಗಿ ಗಮನವನ್ನು ಕೊಡುವುದಿಲ್ಲ. ಇನ್ನು ಬೆಲೆಯನ್ನು ಹಣದ ಮೂಲಕ ಅರ್ಥೈಸಬಹುದು. ಮಕ್ಕಳು ತಮ್ಮ ಕೈಯಲ್ಲಿರುವ ನಾಣ್ಯ ಅಥವಾ ನೋಟಿಗೆ ಯಾವ ಬೆಲೆಯನ್ನು ಕೊಡುವುದಿಲ್ಲ. ನಾವು ಆ ವಸ್ತುವಿಗೆ ಆರೋಪಿಸುವ ಭಾವದ ಹಿನ್ನೆಲೆಯಲ್ಲಿ ಅದರ ಬೆಲೆಯನ್ನು ನಿರ್ಧರಿಸುತ್ತೇವೆ. . ಅಂತೆಯೇ ದೇಶ ಕಾಲ ವ್ಯಕ್ತಿ ಸಂದರ್ಭ ಇವುಗಳಿಗೆ ಅನುಗುಣವಾಗಿ ನಿರ್ಧಾರ ವಾಗುತ್ತದೆ ಅಥವಾ ಬದಲಾಗುತ್ತಾ ಹೋಗುತ್ತದೆ.
ಇನ್ನು ಉಪಲಬ್ಧತೆಯ ಮತ್ತು ಬೇಡಿಕೆಯ ಆಧಾರದ ಮೇಲೆ ಬೆಲೆ ನಿರ್ಧಾರವಾಗುತ್ತದೆ ಉಪಲಬ್ಧತೆಯು ಜಾಸ್ತಿ ಇದ್ದಾಗ ಬೇಡಿಕೆ ಕಡಿಮೆ ಇದ್ದಾಗ ಬೆಲೆ ಕಡಿಮೆ ಇರುತ್ತದೆ. ಉಪಲಬ್ಧತೆ ಕಡಿಮೆ ಇದ್ದಾಗ ಬೇಡಿಕೆ ಜಾಸಿ ಇದ್ದಾಗ ಬೆಲೆ ಜಾಸ್ತಿ ಇರುತ್ತದೆ. ಇವೆಲ್ಲವೂ ಆರ್ಥಿಕಪರವಾದ ಬೆಲೆ ನಿರ್ಧಾರ ಗೊಳ್ಳುವ ರೀತಿ. ಅಲ್ಲದೆ ಸಂಗತಿಗಳಿಗೆ ನಾವು ನೀಡುವ ಮಹತ್ವವೂ ಅದರ ಬೆಲೆ ಎನಿಸುತ್ತದೆ. ಪ್ರತಿಯೊಬ್ಬ ಮಾನವನು ತನಗೆ ಅನ್ಯರು ಎಂದರೆ ಸಮಾಜವು ಬೆಲೆಕೊಡಬೇಕು ಎಂದು ಆಶಿಸುತ್ತಾನೆ. ವ್ಯಕ್ತಿ ತನ್ನ ಮಾತಿಗೆ ಬೆಲೆ,ತನ್ನ ಕೃತಿಗೆ ಬೆಲೆಯನ್ನು ಬಯಸುತ್ತಾನೆ. ಅದೇ ಸಂದರ್ಭದಲ್ಲಿ ವ್ಯಕ್ತಿ ಇತರರ ಮಾತಿಗೆ, ಇತರರ ಕೃತಿಗೆ ಬೆಲೆಯನ್ನು ಕೊಡಬೇಕಾಗುತ್ತದೆ. ಇದನ್ನು ಮರೆಯಬಾರದು. ಗೌರವವನ್ನು ಕೊಟ್ಟು ತೆಗೆದುಕೊಳ್ಳಬೇಕಾದುದು ವಾಸ್ತವದ ಅನಿವಾರ್ಯತೆ. ಕೇವಲ ಇತರರಿಂದ ಬೆಲೆಯನ್ನಷ್ಟೇ ಬಯಸಿದರೆ ಆತ ಸಂಕುಚಿತ ಮನೋಭಾವದವನಾಗುತ್ತನೆ. ತಾನು ಬಯಸಿದ ಮಹತ್ವವ್ವನ್ನು ಅಥವಾ ಬೆಲೆಯನ್ನು ಇತರರೂ ಬಯಸುತ್ತರೆ. ಅದನ್ನು ನೀಡುವುದು ತನ್ನ ಕರ್ತವ್ಯ ಎಂದು ಭಾವಿಸಬೇಕು. ಕೊಡುಕೊಳ್ಳು ವ್ಯವಹಾರದ ಪಾರದರ್ಶಕತೆ ಬದುಕನ್ನು ಎತ್ತರಿಸುತ್ತದೆ ಎನ್ನಬಹುದು.
ಇನ್ನು ನಾವು ನಮ್ಮ ಮಕ್ಕಳಿಗೆ ಒಂದು ವಸ್ತುವಿಗೆ ಬೆಲೆಯನ್ನು ಕೊಡುವ ಮತ್ತು ನಿರ್ಧರಿಸುವ ಅಗತ್ಯವನ್ನು ಮತ್ತು ಔಚಿತ್ಯವನ್ನು ಮನಗಾಣಿಸಬೇಕು. ನಮ್ಮ ಮುಂದೆ ಹಲವು ಆಯ್ಕೆಗಳಿರುತ್ತವೆ. ಮುಂದಿರುವ ಸಂಗತಿಗಳಿಗೆ ಆದ್ಯತೆಯನ್ನು ನೀಡುವ ಜಾಣ್ಮೆಯನ್ನು ನಾವೆಲ್ಲಾ ತಿಳಿದಿರಬೇಕು . ಮಕ್ಕಳಿಗೂ ತಿಳಿಸಿಕೊಡಬೇಕು. ಬೆಲೆ ಅಂದರೆ ಆದ್ಯತೆಗಳನ್ನು ನಿರ್ಧರಿಸದೇ ನಾವು ಕೈಗೊಳ್ಳುವ ಕೆಲಸ- ಕಲಸುಮೇಲೋಗರವಾಗುತ್ತದೆ. ಒಂದು ಪರಿಪೂರ್ಣ ಯೋಜನೆಯ ಹಿನ್ನೆಲಯಲ್ಲಿ ಆದ್ಯತೆಗಳ ಕ್ರಮಬದ್ಧ ಜೋಡಣೆ ಕಂಡು ಬರುತ್ತದೆ ಅಗತ್ಯವಿದ್ದಾಗ ದೊರಕುವ ಸಹಾಯಕ್ಕೆ ತುಂಬಾ ಬೆಲೆಯಿರುತ್ತದೆ.
ಮುತ್ತಿಗಿಂತ ಹೊತ್ತು ಉತ್ತಮ . ಇನ್ನು ಸಮಯಕ್ಕೆ ತುಂಬಾ ಬೆಲೆಯಿದೆ ಎಂದು ಹೇಳುತ್ತೇವೆ. ಸಮಯದ ಮಹತ್ವವನ್ನು ಅರಿತುಕೊಂಡು ಅದನ್ನು ಸದುಪಯೋಗ ಪಡಿಸಿಕೊಂಡರೆ ನಾವು ಸಮಯಕ್ಕೆ ಬೆಲೆಕೊಟ್ಟಂತಾಯಿತು ವಾಸ್ತವದಲ್ಲಿ ಸಮಯಕ್ಕೆ ತನಗೆ ತಾನೆ ಯಾವ ಬೆಲೆಯೂ ಇಲ್ಲ. ನಾವು ಅದಕ್ಕೆ ನೀಡುವ ಮಹತ್ವದ ಆಧಾರದ ಮೇಲೆ ಆಯಾ ವ್ಯಕ್ತಿಯ ಸಂದರ್ಭದ ಸಮಯದ ಬೆಲೆ ನಿರ್ಧರಿತವಾಗುತ್ತದೆ. ಆದರಿಂದಲೇ ತುಂಬಾ ಕ್ರಿಯಾಶೀಲರಾಗಿರುವ ಮಹಾನ್ ಸಾಧಕರ ಸಮಯಗಳು ಅತ್ಯಮೂಲ್ಯ ಅವರ ಭೇಟಿಗೆ ನಾವು ಪೂರ್ವಾನುಮತಿ ಪಡೆದಿರಬೇಕಾಗುವುದು. ವಿಶ್ವೇಶ್ವರಯ್ಯನವರು ನಿಗದಿಪಡಿಸಿದ ಸಮಯಕ್ಕೆ ಭೇಟಿಗೆ ಬರದ ವ್ಯಕ್ತಿಯ ಜೊತೆಗಿನ ಸಂದರ್ಶನವನ್ನು ನಿರಾಕರಿಸಿದ ಉದಾಹರಣೆಯು ಉಂಟು. ನಾವು ಸಮಯಕ್ಕೆ ಬೆಲೆಕೊಟ್ಟು ಅದನ್ನು ವಿಧಾಯಕ ಕಾರ್ಯಗಳ ಸಾಧನೆಗೆ
ಉಪಯೋಗಿಸಿಕೊಂಡರೆ ಸಮಯವೂ ನಮಗೆ ಬೆಲೆಕೊಡುತ್ತದೆ. ಇಂದು ಮಾಡಿದ ಕೆಲಸಕ್ಕೆ ನಾಳೆ ಬೆಲೆ ಇದೆ ಎಂಬುದು ಎಲ್ಲರ ನಂಬಿಕೆ. ಕೆಲವರಿಗೆ ಸಿಗಬೇಕಾದ ಬೆಲೆ ಬೇಗ ಸಿಗಬಹುದು ಕೆಲವರಿಗೆ ತಡವಾಗಿ ಸಿಗಬಹುದು, ನಂಬಿಕೆ ಮುಖ್ಯ.
ಶ್ರಮಕ್ಕೆ ಬೆಲೆಯಿದೆ, ಕಷ್ಟಗಳನ್ನು ಎದುರಿಸುವುದಕ್ಕೆ ಬೆಲೆಯಿದೆ. ಆದರಿಂದ ಹುಟ್ಟಿಕೊಳ್ಳುವ ಅನುಭವಕ್ಕೂ ಬೆಲೆಯಿದೆ. . ಕಷ್ಟಪಡದೇ ದೊರಕಿದ ವಸ್ತುವನ್ನು ನಮ್ಮ ಮನಸ್ಸು ಗೌರವಿಸದು. ಅದಕ್ಕೆ ಬೆಲೆಕಟ್ಟಲಾರದು. ಶ್ರೀಮಂತ ತಂದೆಯೊಬ್ಬ ತನ್ನ ಸೋಮಾರಿ ಮಗನಿಗೆ ಹಣದ ಹಿಂದಿರುವ ಶ್ರಮದ ಮಹತ್ವವನ್ನು ಮನಗಾಣಿಸಲು ಉಪಾಯ ಮಾಡಿದ. ಸಂಜೆಯೊಳಗೆ ಐವತ್ತು ರುಪಾಯಿ ದುಡಿದು ತರಲು ಹೇಳಿದ. ಆಗ ಮಗ ಕಷ್ಟಕ್ಕೆ ಸಿಲುಕಿದ. ದುಡಿದು ಹಣಗಳಿಸುವ ಬಗೆ ಅವನಿಗೆ ತಿಳಿದಿಲ್ಲ. ತಾಯಿಗೆ ಕಷ್ಟವನ್ನು ಹೇಳಿಕೊಂಡ. ತಾಯಿ ಸಮಾಧಾನಿಸಿ ಐವತ್ತು ರೂಪಾಯಿ ಕೊಟ್ತಳು. ಸಂಜೆ ಮನೆಗೆ ಮರಳಿದ ತಂದೆ ಕೇಳಿದ 'ಎಲ್ಲಿ ನೀನು ದುಡಿದು ತಂದ ಹಣ?' ಮಗ ಐವತ್ತು ಯೂಪಾಯಿ ತಂದು ಕೊಟ್ಟ. ತಂದೆಗೆ ಅನುಮಾನ ಬಂತು. ಹೋಗಿ ಹಣವನ್ನು ಬಾವಿಗೆ ಬಿಸಾಕಿ ಬಾ ಎಂದು ಹೇಳಿದ. ಮಗ ನೇರವಾಗಿ ಹೋಗಿ ಬಾವಿಗೆ ಬಿಸಾಕಿ ಬಂದ. ಅರ್ಥಮಾಡಿಕೊಂದ ತಂದೆ ಮರುದಿನ ಹೆಂಡಸ್ತಿಯನ್ನು ತವರಿಗ್ರೀ ಕಳುಹಿಸಿ ಹಿಂದಿನ ದಿನದಂತೆ ಐವತ್ತು ರೂಪಾಯಿ ದುಡಿದು ತರುವಂತೆ ಮಗನಿಗೆ ಹೇಳಿದ. ಮಗನಿನೆ ಇನ್ನೂ ದೊಡ್ಡ ಕಷ್ಟ ಬಂತು. ಸಹಾಯ ಮಾಡಲು ತಾಯಿ ಇರಲಿಲ್ಲ. ಅನಿವಾರ್ಯವಾಗಿ ಮನೆಯಿಂದ ಹೊರಬಿದ್ದ. ಪೇಟೆಯಲ್ಲಿ ಸುತ್ತಾಡಿಒದ. ವ್ಯಾಪಾರ, ವ್ಯವಹಾರ ದುಡಿಯುವ ಜನರನ್ನಲ್ಲಾ ಗಮನಿಸಿದ. ಹೇಗೋ ಮೂಟೆಹೊರುವ ಕೆಲಸಮಾಡಿಐವತ್ತು ರೂಪಾಯಿ ದುಡಿದ. ಸುಸ್ತಾಗಿ ಮನೆಗೆ ಬಂದ. ತಂದೆ ಮಗನಿಗೆ ಹಣವನ್ನು ಬಾವಿಗೆ ಬಿಸಾಕಲು ಹೇಳಿದ. ಮಗ ಬಿಸಾಕಲಿಲ್ಲ ಏಕೆಂದರೆ ಅಂದು ಅವನಿಗೆ ಹಣದ ಹಿಂದಿರುವ ಶ್ರಮಕ್ಕೆ ಬೆಳೆಯಿರುವುದು ಗೊತ್ತಗಿತ್ತು .
ಹೀಗೆ ಬೆಲೆಯ ವಿಚಾರಗಳು ತುಂಬಾ ಸೂಕ್ಷ್ಮ ಮತ್ತು ಹೋಲಿಕೆಯನ್ನು ಅವಲಂಬಿಸಿದ್ದಗಿ ಕಂಡುಬಂದರೂ ಪ್ರತಿ ಹಣ, ಪ್ರತಿ ಕೆಲಸ ಮತ್ತು ಪ್ರತಿ ರಚನೆಯ ಹಿಂದೆ ಒಂದು ದುಡಿಮೆ ಇರುತ್ತದೆ. ಅದನ್ನು ಗೌರವಿಸಲು ಕಲಿಯೋಣ.